ಮೂಲದೊಡನೆ ಪರಿಶೀಲಿಸಿ

ಆಲೂಗಡ್ಡೆ

ಸೊಲೆನೇಸಿ ಕುಟುಂಬ : ವೈe್ಞÁನಿಕ ನಾಮ ಸೊಲೇನಂ ಟ್ಯೊಬರೋಸ : ಪರ್ಯಾಯನಾಮಗಳು ಪೊಟೆಟೋ, ಬಟಾಟೆ. ತರಕಾರಿಯಾಗಿ ಇದರ ಮುಖ್ಯ ಉಪಯೋಗ : ಉದ್ದಿಮೆಗಳಲ್ಲಿ ಕಚ್ಚಾವಸ್ತುವಾಗಿಯೂ ಬಳಕೆಯಲ್ಲಿದೆ. ಹಿತಕರ ರುಚಿ, ಉಪಯೋಗ ವೈವಿಧ್ಯ,. ರಕ್ಷಿಸಿದರೆ ದೀರ್ಘಕಾಲ ಕೆಡದೆ ಉಳಿಯುವಿಕೆ. ದಾಸ್ತಾನು ಸಾಗಾಣಿಕೆಗಳಲ್ಲಿ ಸೌಲಭ್ಯ- ಈ ಕಾರಣಗಳಿಂದ ಆಲೂಗೆಡ್ಡೆ ಜನಪ್ರಿಯತೆ ಗಳಿಸಿದೆ. 

ಮೂಲ : ದಕ್ಷಿಣ ಅಮೇರಿಕದ ಚಿಲಿ ಪ್ರದೇಶದಲ್ಲಿಯೂ ಪೆರು, ಈಕ್ವೆಡಾರ್, ಬೊಲವಿಯ ವಲಯದಲ್ಲಿಯೂ ಆಲೂಗಡ್ಡೆಯ ಮೂಲವನ್ನು ಗುರುತಿಸಿದ್ದಾರೆ. ಇದರ ಕಾಡು ಜಾತಿಗಳು ಇಂದಿಗೂ ನೂರಾರು ಪ್ರಭೇದಗಳಲ್ಲಿ ಅಲ್ಲಿ ಇವೆ. 1577ರ ಸುಮಾರಿಗೆ ಯೂರೋಪಿ£ ನಾವಿಕರು ಅಮೆರಿಕದ ಇಂಡಿಯನ್ ಜನಾಂಗ ಆಲೂಗೆಡ್ಡೆಯನ್ನು ಆಹಾರವಾಗಿ ಉಪಯೋಗಿಸುತ್ತಿದ್ದುದನ್ನು ಗಮನಿಸಿದರು. ಸ್ಪೇನ್ ದೇಶದ ನಾವಿಕರು ಇವರ ಅನುಕರಣೆ ಮಾಡಿದುದರ ಫಲವಾಗಿ ಆಲೂಗೆಡ್ಡೆ ಹಡಗುಗಳಲ್ಲಿನ ಒಂದು ಮುಖ್ಯ ಆಹಾರವಾಗಿ ಪರಿಣಮಿಸಿತು. ಈ ತೆರನಾಗಿ ಆಲೂಗೆಡ್ಡೆ ಅಟ್ಲಾಂಟಿಕ್ ಸಾಗರ ದಾಟಿ ತನ್ನ ವ್ಯಾಪ್ತಿಯನ್ನು ಯೂರೋಪ್ ಖಂಡದಲ್ಲಿಯೂ ಬ್ರಿಟಿಷ್ ದ್ವೀಪಗಳಲ್ಲಿಯೂ ಪಸರಿಸಿತು. 1588ರ ಸುಮಾರಿಗೆ ಐರ್ಲೆಂಡಿನಲ್ಲಿ ಇದರ ಬೆಳೆ ತೆಗೆದುದಕ್ಕೆ ಆಧಾರ ಉಂಟು. ಆ ದ್ವೀಪದಲ್ಲಿ ಇದರ ಪ್ರಾಬಲ್ಯ ಅಧಿಕವಾದುದರ ಪರಿಣಾಮವಾಗಿ ಐರಿಷ್ ಆಲೂಗಡ್ಡೆ ಎಂಬ ರೂಢಿಯನಾಮ ಜನಪ್ರಿಯವಾಯಿತು (1719). ಭಾರತಕ್ಕೆ ಆಲೂಗಡ್ಡೆಯ ಆಗಮನ ಯಾವಾಗ ಆಯಿತೆಂಬುದು ಸರಿಯಾಗಿ ಹೇಳಲಾಗದಿದ್ದರೂ 17ನೆಯ ಶತಮಾನದ ಆದಿಯಲ್ಲಿ ಅಂದರೆ ಯೂರೋಪ್‍ನಲ್ಲಿ ಉಪಯೋಗಮಾಡಿದ ಕೇವಲ 40 ವರ್µಗಳಲ್ಲಿ ಕೆಲವು ಉನ್ನತ ಅಧಿಕಾರಿಗಳ ಕ್ಷೇತ್ರದಲ್ಲಿ ಇದು ಜನಪ್ರಿಯವಾಗಿತ್ತೆಂದು ಹೇಳಬಹುದು. ಮೊಟ್ಟ ಮೊದಲು ಪೋರ್ಚುಗೀಸರು ಭಾರತಕ್ಕೆ ತಂದಿರಬಹುದೆಂದು ಊಹಿಸಿದ್ದಾರೆ. ಮಿಲಿಟರಿ ಅಧಿಕಾರಿಗಳು ಮತ್ತು ಆಂಗ್ಲೇಯರು ಈ ಹೊಸ ತರಕಾರಿಯನ್ನು ಹೆಚ್ಚು ಆಸ್ಥೆಯಿಂದ ತಮ್ಮ ಉದ್ಯಾನಗಳಲ್ಲಿ ಬೆಳೆಸುತ್ತಿದ್ದರು. ಇದು ಸಾಧಾರಣ ಮನುಷ್ಯನಿಗೂ ದೊರಕುವಂತೆ ಮಾಡಿದ ಕೀರ್ತಿ ಮೇಜರ್ ಯಂಗ್‍ನದು (19ನೆಯ ಶತಮಾನ). ಇವನು ಆಗಿನ ಕಾಲಕ್ಕೆ ಉತ್ತಮ ಜಾತಿಯದು ಎನಿಸಿದ್ದ ಆಲೂಗಡ್ಡೆ ಬೀಜಗಳನ್ನು ಡೆಹರಾಡೊನಿನ ಬೆಟ್ಟಗುಡ್ಡಗಳ ನಾಡಿನಲ್ಲಿ ಬೆಳೆಸಲಾರಂಭಿಸಿದ. ಸುಮಾರು 1839ರ ವೇಳೆಗೆ ಅದು ಭಾರತದಲ್ಲಿ ತನ್ನ ಅಸ್ತಿತ್ವವನ್ನು ದೃಢಮಾಡಿಕೊಂಡಿತು. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ಆಹಾರ ಕೊರತೆ ಹೆಚ್ಚು ಕಂಡುಬಂದು ಬೇಗ ಕೆಡದಂಥ, ಕೊಳೆಯದಂಥ ತರಕಾರಿಯ ಅವಶ್ಯಕತೆ ಹೆಚ್ಚಾಗುತ್ತಾ ಬಂತು. ಹೀಗಾಗಿ ಆಲೂಗಡ್ಡೆಯ ಒಳ್ಳೆಯ ಸ್ಥಾನಲಭಿಸಿತು. ಅಂದಿನಿಂದ ಇದು ಬಹುಜನಪ್ರಿಯವಾಗಿ ಇದರ ವಿಸ್ತøತ ವ್ಯವಸಾಯ ಆರಂಭವಾಯಿತು. ದೇಶದ ಉದ್ದಗಲಕ್ಕೆ ಇದರ ಬೆಳೆ ಹಬ್ಬಿತು. ಅಸ್ಸಾಂ, ನೀಲಗಿರಿ, ಬಿಹಾರ್ ಮುಂತಾದ ಪ್ರದೇಶಗಳಲ್ಲಿ ಹೊಸ ಹೊಸ ಜಾತಿಯ ಬೀಜಗಳನ್ನು ಇಂಗ್ಲೆಂಡ್, ಆಸ್ಟ್ರೇಲಿಯ ದೇಶಗಳಿಂದ ತರಿಸಿಕೊಂಡು ಬೆಳೆಸಲಾರಂಭಿಸಿದರು. ಕೆಲವು ಜಾತಿಗಳು ವಾತಾವರಣದ ವೈಪರೀತ್ಯವನ್ನು ಎದುರಿಸಲಾರದೆ ನಿರೀಕ್ಷಿಸಿದ ಫಸಲು ನೀಡಲಿಲ್ಲ. ಇನ್ನುಳಿದವು ತಮ್ಮತನವನ್ನು ಉಳಿಸಿಕೊಂಡು ಸ್ಥಿರವಾದ ಮತ್ತು ಉತ್ತಮ ದರ್ಜೆಯ ಫಸಲು ಕೊಡತೊಡಗಿದವು. 

ಸಸ್ಯ : ಸೋಲನಂ ಜಾತಿಯಲ್ಲಿ 1,500ಕ್ಕೊ ಹೆಚ್ಚು ಪ್ರಭೇದಗಳಿವೆ. ಅವುಗಳಲ್ಲಿ ಟ್ಯೊಬೆರೋಸಮ್ ಮುಖ್ಯವಾದದ್ದು. ಆಲೂಗೆಡ್ಡೆ ಏಕಋತುವಿನ ಪರ್ಣಸಸಿ. ಎಲೆ ಸಂಯುಕ್ತ ಪತ್ರ : ಅಭಿಮುಖ ಜೋಡಣೆ: ನಯವಾದ ಅಂಚು : ಮೊನಚು ಅಥವಾ ಮೊಂಡು ತುದಿ : ಕಾಂಡ ನೇರವಾಗಿದೆ. : ಭೂಮಿಗಿಳಿದ ಕಾಂಡದ ತುದಿಯಲ್ಲಿ ಗೆಡ್ಡೆಯಿರುತ್ತದೆ: ತುತ್ತತುದಿಯಲ್ಲಿ ಹೂಗೊಂಚಲು : ಹೊ ದ್ವಿಲಿಂಗ ಪುಷ್ಪಗಳು : ಪುಷ್ಪಪಾತ್ರೆ 5 : ದಳ 5 : ದಳಗಳ ಬಣ್ಣ ಬಿಳಿ, ನೀಲಿ, ಕಡುಗೆಂಪು : ಕೇಸರಗಳು 5 : ಅಂಡಾಶಯ 3 ಭಾಗ : ಬಹು ಅಂಡಗಳುಳ್ಳ ಅಂಡಾಶಯ : ಫಲ ಬೆರಿ ಮಾದರಿಯದು. 
ತಳಿಗಳು : ಪುಲ್ ವ, ಅಪ್-ಟು-ಡೇಟ್, ಪ್ರೆಸಿಡೆಂಟ್, ಗ್ರೇಟ್ ಸ್ಕಾಟ್, ಕುಪ್ರಿ ಕುಂದನ್, ಹೈಬ್ರಿಡ್ 12, ಹೈಬ್ರಿಡ್ 13, ಸಾತೊ, ಮೆಜಸ್ಟಿಕ್. ಇಟಾಲಿಯನ್ ವೈಟ್ ರೌಂಡ್, ಲೇಟ್ ಜರ್ಮನ್ - ಇವು ಆಲೂಗಡ್ಡೆಯ ಬೇರೆ ಬೇರೆ ತಳಿಗಳು. 

ಬೆಳೆ : ಆಲೂಗಡ್ಡೆ ಸುಮಾರು 2'-3' ವರೆಗೆ ಬೆಳೆಯುವ ಸಣ್ಣ ಸಸ್ಯ. ಅದರ ಬೇರುಗಳು ನಾರಿನಂತಿವೆ. ಇವು ಭೂಮಿಯಲ್ಲಿ ಹೆಚ್ಚು ಆಳ ಹೋಗುವುದಿಲ್ಲ. ತೇವವಿರುವ ಭೂಮಿಯಲ್ಲಿ ಸುಮಾರು 1ಳಿ ವರೆಗೊ ಹೋಗಬಹುದು. ಸಾಧಾರಣವಾಗಿ ಈ ಸಸ್ಯದಲ್ಲಿ ಕಾಯಿ ಬಿಡುವುದಿಲ್ಲ. ಸರಿಯಾದ ವಾತಾವರಣವಿದ್ದಾಗ ಕಾಯಿ ಬಿಡುವುದಿದೆ. 

ಗೆಡ್ಡೆ ಕಾಂಡದ ಕವಲಿನ ತುದಿಯಲ್ಲಿ ಕಾಣಬಹುದು. ಒಂದು ಗಿಡದಲ್ಲಿ ಇಂಥ ಕಾಂಡದ ಕವಲುಗಳ ತುದಿಗಳು ಹಲವಾರು ಇರುತ್ತವೆ. ಸ್ಟೋಲಾನ್ ಎಂದು ಇವುಗಳ ಹೆಸರು. ಗೆಡ್ಡೆ ಸಾಮಾನ್ಯವಾಗಿ ಚಿಕ್ಕದಾಗಿದ್ದು ದಪ್ಪವಾಗಿರುತ್ತದೆ. ಸಂಪೂರ್ಣವಾಗಿ ಬಲಿತ ಗೆಡ್ಡೆಯ ಮೇಲೆ ಹಲವಾರು ಸಣ್ಣ ಸಣ್ಣ ಕುಳಿಗಳಂತಿರುವ ಕಣ್ಣುಗಳನ್ನು ಕಾಣಬಹುದು. ಈ ಕಣ್ಣುಗಳ ಭಾಗವನ್ನು ಕತ್ತರಿಸಿ ಭೂಮಿಯಲ್ಲಿ ನೆಡಬಹುದು. ನಿರ್ಲಿಂಗರೀತಿಯಲ್ಲಿ ಸಸ್ಯವನ್ನು ಈ ರೀತಿ ವೃದ್ಧಿಸಬಹುದು. ಹಾಗೆ ವೃದ್ಧಿಗೊಂಡ ಗಿಡಗಳಲ್ಲಿ ಮತ್ತೆ ಗೆಡ್ಡೆಗಳು ಬೆಳೆದು ಪೀಳಿಗೆಯನ್ನು ಮುಂದುವರಿಸುತ್ತವೆ. ಸುಮಾರು ಎರಡು ತಿಂಗಳಲ್ಲಿ ಗಿಡ ಒಳ್ಳೆಯ ಆಕಾರದ ಗೆಡ್ಡೆಗಳನ್ನು ಕೊಡುವುದು. 

ಆಲೂಗೆಡ್ಡೆಯ ಬೆಳೆಗೆ ಭೂಮಿಯಲ್ಲಿರುವ ಶೈತ್ಯಾಂಶ ಮತ್ತು ಹವಾಗುಣ ಬಹಳ ಮುಖ್ಯ. ಬೆಳೆಯ ಭವಿಷ್ಯವನ್ನೇ ಹವಾಗುಣ ನಿರ್ಧರಿಸುತ್ತದೆ ಎಂದರೆ ಆಶ್ಚರ್ಯವೇನಲ್ಲ. ಸಾಮಾನ್ಯವಾಗಿ ಆಲೂಗೆಡ್ಡೆ ತಣ್ಣಗೆ ಹವೆಯಿರುವ ಮತ್ತು ತೇವವಿರುವ ಪ್ರದೇಶದಲ್ಲಿ ಬೆಳೆಯುತ್ತದೆ ಹೆಚ್ಚಾಗಿ ಸಿಮ್ಲಾ , ಡಾರ್ಜಿಲಿಂಗ್, ನೈನಿತಾಲ್, ರಾಂಚಿ, ಮಹಾಬಲೇಶ್ವರ, ನೀಲಗಿರಿ ಪ್ರದೇಶಗಳಲ್ಲಿ 2,500'-7,000' ಎತ್ತರದಲ್ಲೂ ಇದನ್ನು ಬೆಳೆಸುತ್ತಾರೆ. ಬಯಲು ಪ್ರದೇಶದಲ್ಲಿ ಚಳಿಗಾಲದ ಬೆಳೆಯಾಗಿ ಕೂಡ ಇದರ ಕೃಷಿ ನಡೆಯುತ್ತದೆ. 

ಮೈಸೂರುರಾಜ್ಯದಲ್ಲಿ ಆಲೊಗೆಡ್ಡೆಯ ಬೆಳೆಯನ್ನು ಮೂರು ಕಾಲದ ಬೆಳೆಯಾಗಿ ವಿಭಾಗಿಸಬಹುದು. 1. ಮಳೆಗಾಲದ ಬೆಳೆ : 2. ಚಳಿಗಾಲದ ಬೆಳೆ : 3. ಬಿತ್ತನೆ ಅಥವಾ ಬೇಸಗೆ ಬೆಳೆ. ಎಲ್ಲ ಋತುಗಳಲ್ಲಿಯೂ ಮೈಸೂರುರಾಜ್ಯದಲ್ಲಿ ಆಲೂಗೆಡ್ಡೆ ಬೆಳೆಸಬಹುದಾದರೂ ಚಳಿಗಾಲದ ಬೆಳೆ ಫಸಲು ದೃಷ್ಟಿಯಿಂದ ಅತ್ಯುತ್ತಮ. 
ಮಳೆಗಾಲದ ಬೆಳೆ : ಬೇಸಗೆಯಲ್ಲಿ ಆಳವಾಗಿ ಅಗತೆ ಮಾಡಿ ಮುಂಗಾರು ಮಳೆ ಪ್ರಾರಂಭವಾದ ತತ್‍ಕ್ಷಣ ಆಲೂಗೆಡ್ಡೆ ಬೆಳೆ ಹಾಕುತ್ತಾರೆ. ಇದು ಮಳೆಯನ್ನೇ ಆಶ್ರಯಿಸಿ ಬೆಳೆಯುತ್ತದೆ. ನೀರಾವರಿಯಿಂದಲೂ ಬೆಳೆ ತೆಗೆಯುತ್ತಾರೆ. ರಾಗಿ ಬೆಳೆಯುವ ಹೊಲಗಳಲ್ಲಿ ಆಲೂಗೆಡ್ಡೆಯನ್ನು ಹಾಕಿ, ಬೆಳೆ ತೆಗೆದ ತತ್‍ಕ್ಷಣ ರಾಗಿ ಪೈರು ನಾಟಿ ಮಾಡುತ್ತಾರೆ. ಬೆಳೆಯ ಅವಧಿ ಜಾತಿಗಳನ್ನು ಅನುಸರಿಸುತ್ತದೆ. 

ಚಳಿಗಾಲದ ಬೆಳೆ : ಮೈಸೂರುರಾಜ್ಯದಲ್ಲಿ ವರ್ಷದ ಬಹುಭಾಗದ ಉತ್ಪಾದನೆ ಚಳಿಗಾಲದ್ದು. ರಾತ್ರಿಯ ತಂಪಾದ ಹವಾಗುಣ ಬೆಳೆಗೆ ಉತ್ತೇಜನಕಾರಿ. ಈ ಬೆಳೆಯನ್ನು ನೀರಾವರಿ ಆಶ್ರಯದಿಂದ ತೆಗೆಯುತ್ತಾರೆ. 
ಬೇಸಗೆ ಬೆಳೆ : ಬೇಸಗೆ ಬೆಳೆಯನ್ನು ಬಿತ್ತನೆ ಆಲೂಗೆಡ್ಡೆಗಾಗಿ ಬೆಳೆಸುತ್ತಾರೆ. ಬೆಳೆ ಬಲು ಕಡಿಮೆ. ಇದಕ್ಕೆ ಯಥೇಚ್ಚವಾಗಿ ನೀರಾವರಿಯ ಆಶ್ರಯ ಬೇಕು. 

ಬಿತ್ತನೆ : ಆ¯ೂಗೆಡ್ಡೆ ಬೇಸಾಯ ಹೆಚ್ಚು ಖರ್ಚಿನದು. ಗೆಡ್ಡೆಯ ಮೇಲಿರುವ 2-3 ಕಣ್ಣುಗಳನ್ನು ಕತ್ತರಿಸಿ ನೆಡುವುದು ರೂಢಿಯ ಬೇಸಾಯಕ್ರಮ. ಗೆಡ್ಡೆ ಗಾತ್ರದಲ್ಲಿ ಸಣ್ಣವಾಗಿದ್ದರೆ ಕತ್ತರಿಸದೆ ನೆಡುವುದು ಒಳ್ಳೆಯದು. ದಪ್ಪವಾಗಿರುವ ಗೆಡ್ಡೆಗಳನ್ನು ಬಿತ್ತನೆ ಮಾಡಿದರೆ ಫಸಲು ಕಡಿಮೆಯಾಗುತ್ತದೆ. ಬಿತ್ತನೆ ಗೆಡ್ಡೆ ತನ್ನ ಹಿಂದಿನ ಪೀಳಿಗೆಯ ಎಲ್ಲ ಶ್ರೇಷ್ಟ ಗುಣಗಳನ್ನೊ ಹೊಂದಿರಬೇಕು. 3.5-4 ಸೆಂ.ಮೀ. ಮಧ್ಯಗಾತ್ರದವು ಬಿತ್ತನೆಗೆ ಯೋಗ್ಯ.. ರೋಗ ಅಥವಾ ಕೀಟಪೀಡಿತ ಗೆಡ್ಡೆ, ಒಳಭಾಗದಲ್ಲಿ ಮಚ್ಚಗಳಿರುವ ಗೆಡ್ಡೆ, ಕಣ್ಣುಗಳಲ್ಲಿ ಸರಿಯಾಗಿ ಮೊಳಕೆ ಬಾರದೆ ಇದ್ದ ಗೆಡ್ಡೆ ಇವುಗಳನ್ನು ಬಿತ್ತಬಾರದು. ಉತ್ತಮಫಸಲು ಮತ್ತು ಫೀಳಿಗೆ ಅಭಿವೃದ್ಧಿ ದೃಷ್ಟಿಯಿಂದ ಈ ಎಚ್ಚರಿಕೆ ಅತ್ಯಗತ್ಯ. ಆಲೊಗೆಡ್ಡೆ ಅಗೆದು ತೆಗೆದು ಮೂರು ತಿಂಗಳು ನಿದ್ರಾವಸ್ಥೆ ಕಳೆದ ಮೇಲೆ ಮಾತ್ರ ಮೊಳೆಯಬಲ್ಲವು. ಬೀಜ ಪ್ರಮಾಣ ಸಾಮಾನ್ಯವಾಗಿ ಎಕರೆಗೆ 400-700 ಕೆ.ಜಿ. ಗಳು. ಈ ಪ್ರಮಾಣ ಆಲೊಗೆಡ್ಡೆಯ ಪೀಳಿಗೆಯನ್ನು ಅನುಸರಿಸಿ ವ್ಯತ್ಯಾಸವಾಗಬಹುದು. 

ಬೆಳೆಯ ಆವರ್ತ (ರೊಟೇಷನ್ ಆಫ್ ಕ್ರಾಪ್ಸ್) : ಮಣ್ಣಿನ ಸಾರ ಮತ್ತು ಫಸಲಿನ ದೃಷ್ಟಿಯಿಂದ ವರ್ಷದ ಎಲ್ಲ ಕಾಲದಲ್ಲೊ ಆಲೊಗೆಡ್ಡೆ ಬೆಳೆಯುವುದು ಒಳ್ಳೆಯದಲ್ಲ. ಆದ್ದರಿಂದ ಆಲೊಗೆಡ್ಡೆ-ರಾಗಿ, ಆಲೊಗೆಡ್ಡೆ-ಹುರುಳಿ ಈ ಕ್ರಮದಲ್ಲಿ ಮಳೆಯನ್ನು ಆಶ್ರಯಿಸುವ ಬೆಳೆಗೆ ಪರ್ಯಾಯವಾಗಿಯೂ ನೀರಾವರಿ ಆ¯ೂಗೆಡ್ಡೆಯನ್ನು ಹುರುಳಿಕಾಯಿ, ಕೋಸು, ಮೂಲಂಗಿ, ಬೆಂಡೆಕಾಯಿ, ಸೌತೇಕಾಯಿ, ನವಿಲುಕೋಸು, ಬೀಟ್‍ರೊಟ್, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳೊಡನೆ ಪರ್ಯಾಯವಾಗಿಯೂ ಬೆಳೆಸುವುದು ರೊಢಿಯಲ್ಲಿದೆ. 

ಮಿಶ್ರ ಬೆಳೆ : ಆ¯ೂಗೆಡ್ಡೆಯನ್ನು ಸಾಮಾನ್ಯವಾಗಿ ಶುದ್ಧ ಬೆಳೆಯನ್ನಾಗಿಯೇ ಬೆಳೆಸುತ್ತಾರೆ. ಕೆಲವು ಸಲ ಸೊಪ್ಪನ್ನು ಮಿಶ್ರ ಬೆಳೆಯಾಗಿ ಹಾಕಿ ಮಣ್ಣು ಏರು ಹಾಕುವ ಕಾಲಕ್ಕೆ ಸರಿಯಾಗಿ ಉಪಬೆಳೆ ಮುಗಿದು ಹೋಗುತ್ತದೆ. ಬದುಗಳ ಮೇಲೆ ಈರುಳ್ಳಿ, ಬೆಳ್ಳುಳಿ, ಕೊತಂಬರಿ ಮುಂತಾದವುಗಳನ್ನು ಮಿಶ್ರ ಬೆಳೆಯಾಗಿ ಹಾಕುವುದು ರೂಢಿಯಲ್ಲಿದೆ. 

ಗೊಬ್ಬರ : ಆ¯ೂಗೆಡ್ಡೆ ಬೇಸಾಯಕ್ಕೆ ಅಧಿಕ ಗೊಬ್ಬರ ಅಗತ್ಯ . ಎಕರೆಗೆ 20 ಗಾಡಿಯಷ್ಟು ಕೊಟ್ಟಿಗೆ ಗೊಬ್ಬರ ಬೇಕು. ಎಕರೆಗೆ 200 ಕೆ.ಜಿ. ನೈಟ್ರೊಜನ್, 100 ಕೆ.ಜಿ ಫಾಸ್ಫರಸ್ ಮತ್ತು 200 ಕೆ.ಜಿ. ಪೊಟ್ಯಾಷ್ ಬೇಕಾಗುತ್ತದೆ. 
ನೆಡುವುದು : ನೆಡುವ ಪದ್ಧತಿ ನೀರಾವರಿಯನ್ನು ಅನುಸರಿಸಿದೆ. ಮಳೆ ಆಶ್ರಯಿಸಿ ಹಾಕುವ ಬೆಳೆಯನ್ನು ನೇಗಿಲ ಸಹಾಯದಿಂದ ಉತ್ತು ನೆಡುತ್ತಾರೆ. ಎರಡು ಅಂತರದಲ್ಲಿ ಹಾದು ಹೋದ ನೇಗಿಲ ಸಾಲಿನಲ್ಲಿ 1ಳಿ 3" ಆಳದಲ್ಲಿ ಹಾಕಿ ಮಣ್ಣು ಮುಚ್ಚುತ್ತಾರೆ. ನೀರಾವರಿ ಬೆಳೆ ಹಾಕುವಾಗ 1ಳಿ ಅಂತರದಲ್ಲಿ 4 ಆಳದ ಕಾಲುವೆಗಳನ್ನು ತೆಗೆದು 1' ಅಂತರದಲ್ಲಿ ನೆಡುತ್ತಾರೆ. ಆದರೆ ಆ¯ೂಗೆಡ್ಡೆ ನೆಡುವುದಕ್ಕೆ ರೈತರು ಅಂತರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಕೆಲವು ಸಾರಿ 6" ಅಂತರದಲ್ಲಿ ಸಹ ನೆಡುತ್ತಾರೆ. ಆ¯ೂಗೆಡ್ಡೆ ಬೇಸಾಯದಲ್ಲಿ ಕಳೆಕೀಳುವುದು, ಮಣ್ಣು ಏರು ಹಾಕುವುದು ಮುಖ್ಯವಾದ ಮಧ್ಯಕಾಲದ ಬೇಸಾಯಕ್ರಮ. ನೆಟ್ಟ ಮೇಲೆ ಪೂರ್ತಿಯಾಗಿ ಮೊಳೆಯಲು 2-3 ವಾರಬೇಕು. ನೆಟ್ಟ ಒಂದು ತಿಂಗಳ ಅನಂತರ ಕಳೆ ಕೀಳಬೇಕು. ಎರಡನೆಯ ಸಲ ನೆಟ್ಟ 1ಳಿ ತಿಂಗಳ ಅನಂತರ ಕಳೆ ಕಿತ್ತು ಕೈಗುದ್ದಲಿಯಿಂದ ಮೊಳಕೆಗಳ ಎರಡು ಕಡೆಗಳಲ್ಲಿ ಮಣ್ಣನ್ನು ಅಗತೆ ಮಾಡಿ ಆ¯ೂಗೆಡ್ಡೆ ಬುಡಗಳಿಗೆ 4" ಎತ್ತರ ಮಣ್ಣನ್ನು ಏರು ಹಾಕಬೇಕು. 

ಗೆಡ್ಡೆಯಾಗುವಿಕೆ : ಆಲೂಗೆಡ್ಡೆ ನೆಟ್ಟ 1ಳಿ ತಿಂಗಳಲ್ಲಿ ಮೇಲೆ ಸಸ್ಯದ ಹಸಿರು ಭಾಗ ಬೆಳೆಯುತ್ತದೆ. ಆ ಹೊತ್ತಿಗೆ ಸಣ್ಣ ಸಣ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಇವು ಕ್ರಮೇಣ ದಪ್ಪವಾಗುತ್ತ ಬರುತ್ತವೆ. ನೆಟ್ಟ ಮೂರನೆಯ ತಿಂಗಳಲ್ಲಿ ಇವು ಪರಮಾವಧಿ ಗಾತ್ರ ಮುಟ್ಟುತ್ತವೆ. ಮಣ್ಣಿನಲ್ಲಿ ಸರಿಯಾದ ಗೊಬ್ಬರ ಪ್ರಮಾಣ ಇಲ್ಲದೆ ಇದ್ದು ಅಥವಾ ಯಾವುದೇ ಕಾರಣದಿಂದ ಮಣ್ಣು ಜಿಗುಟಾಗಿದ್ದರೆ ಗೆಡ್ಡೆ ದಪ್ಪವಾಗಲು ಅವಕಾಶವಿರುವುದಿಲ್ಲ. ಆ¯ೂಗೆಡ್ಡೆ ಸಸ್ಯ ಅದರ ಜೀವಿತದ ಪರಮಾವಧಿ ಮುಟ್ಟಿದ ಮೇಲೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗಲು ಪ್ರಾರಂಭಿಸುತ್ತವೆ. ಅಗತೆಗೆ ಬರುವ ಅವಧಿ ಜಾತಿUಳನ್ನು ಅನುಸರಿಸಿ ವ್ಯತ್ಯಾಸವಾಗುತ್ತದೆ. ಮಳೆಯನ್ನು ಆಶ್ರಯಿಸಿರುವ ಬೆಳೆ ಸಾಮಾನ್ಯವಾಗಿ ಅಧಿಕ ಅವಧಿಯದು : ಅದಕ್ಕೆ 5 ತಿಂಗಳು ಬೇಕಾಗುತ್ತದೆ : ನೀರಾವರಿ ಬೆಳೆ ನೆಟ್ಟ ಮೂರು ತಿಂಗಳಲ್ಲಿ ಅಗತೆಗೆ ಬರುತ್ತದೆ. ಬೆಳೆಯ ಪರಮಾವಧಿ ಸೂಚನೆ ಕಂಡ ಕೊಡಲೆ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ಅನಂತರ ಗುದ್ದಲಿಯ ಸಹಾಯದಿಂದ ಪ್ರತಿ ಸಸ್ಯವನ್ನು ಕಿತ್ತು ಗೆಡ್ಡೆಗಳನ್ನು ಬೇರ್ಪಡಿಸಬೇಕು. ಬಿತ್ತನೆಗಾಗಿ ಬೆಳೆದ ಬೆಳೆಯನ್ನು ಪರಮಾವಧಿಗಿಂತ ಎರಡು ವಾರಗಳ ಮುಂಚೆ ಅಗತೆ ಮಾಡುತ್ತಾರೆ. 

ಫಸಲು : ಆ¯ೂಗೆಡ್ಡೆ ಹೆಚ್ಚು ಫಸಲು ಕೊಡುವ ಬೆಳೆ. ಎಕರೆಗೆ 6-10 ಟನ್ನು ಆ¯ೂಗೆಡ್ಡೆ ಸಿಕ್ಕುತ್ತದೆ. ಆದರೆ ಸಾಮಾನ್ಯವಾಗಿ ಫಸಲಿನ ಪ್ರಮಾಣ ಜಾತಿ, ಬೇಸಾಯ ಪದ್ಧತಿ, ಸೀಮೆಗೊಬ್ಬರ, ನೀರಾವರಿ ಸೌಲಭ್ಯ ಮುಂತಾದವುಗಳನ್ನು ಅವಲಂಬಿಸಿದೆ. 
ಆಲೂಗೆಡ್ಡೆ ಶೇಖರಣೆ : ಆ¯ೂಗೆಡ್ಡೆ ಮಾರುಕಟ್ಟೆಗೆ ಒಂದೇ ಸಾರಿ ಬರುವುದರಿಂದ ಬೆಲೆ ತೀರ ಕಡಿಮೆಯಾಗುತ್ತದೆ. ಇದನ್ನು ಸಾಧಾರಣ ಸ್ಥಿತಿಯಲ್ಲಿ ಹೆಚ್ಚು ದಿವಸಗಳು ಇಡಲು ಸಾಧ್ಯವಾಗದೆ ಇರುವುದರಿಂದ ನ್ಯಾಯ ಬೆಲೆ ರೈತರಿಗೆ ಸಿಗುವುದು ಅಪೂರ್ವ. ಈ ತೊಂದರೆಯನ್ನು ತಪ್ಪಿಸಲು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ವಿಧಾನ ರೂಢಿಯಲ್ಲಿದೆ. ಆ¯ೂಗೆಡ್ಡೆಯನ್ನು ರಾಶಿ ಹಾಕಿ ಅದರ ಮೇಲೆ 2"-3" ದಪ್ಪವಾಗಿ ಸೊಪ್ಪು ಹೊದಿಸಿ ಅದರ ಮೇಲೆ ಮಣ್ಣು ಹಾಕುತ್ತಾರೆ. ಕೆಲವು ಕಡೆಗಳಲ್ಲಿ ರಂಧ್ರ ಮಾಡಿ ಗೆಡ್ಡೆಗಳಿಗೆ ಉಸಿರಾಡಲು ಅವಕಾಶ ಮಾಡಿಕೊಡುತ್ತಾರೆ. ಮೈಸೂರುರಾಜ್ಯದ ತೋಟಗಾರಿಕೆ ಇಲಾಖೆಯವರು ಇದರ ಮಹತ್ವವನ್ನು ಅರಿತು ಹಾಸನದಲ್ಲಿ ಮತ್ತು ಬೆಂಗಳೂರಿನ ಲಾಲ್‍ಬಾಗಿನಲ್ಲಿ ಎgಡು ಶೀತಶೇಖರಣಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಬಿತ್ತನೆ ಆಲೂಗೆಡ್ಡೆಯನ್ನು ಮರಳಿನಲ್ಲಿ ಶೇಖರಿಸುವುದು ಗ್ರಾಮಾಂತರ ಪ್ರದೇಶಗಳಲ್ಲಿ ರೂಢಿಯಲ್ಲಿರುವ ವಿಧಾನ. ಗಾರೆ ಮತ್ತು ಸಿಮೆಂಟ್ ಹಾಕಿರುವ ನೆಲದ ಮೇಲೆ ಬಿತ್ತನೆ ಆ¯ೂಗೆಡ್ಡೆಯನ್ನು ಹಾಕಬಾರದು. 

ಆಹಾರಾಂಶ : ಆ¯ೂಗೆಡ್ಡೆಯಲ್ಲಿರುವ ಮನುಷ್ಯನ ಬೆಳೆವಣಿಗೆಗೆ ಅವಶ್ಯವಾಗಿರುವ ಆಹಾರಾಂಶದ ವಿವರ ಈ ಕೆಳಗೆ ಕಾಣಿಸಿದೆ. 
100 ಗ್ರಾಮ್ ಆಲೂಗಡ್ಡೆಯಲ್ಲಿ
ಸೇಕಡಾವಾರು

ತೇವಾಂಶ (ನೀರು)
ಸಕ್ಕರೆ
ಜೀವಾತುಗಳು
ಮೇದಸ್ಸು
	ಸುಣ್ಣ
ಲವಣಗಳು       ರಂಜಕ
	ಕಬ್ಬಿಣ
74.70
01.60
00.10
00.60
00.10
00.30
00.07

ಆ¯ೂಗೆಡ್ಡೆಯ ಪಿಷ್ಟದ ಅಂಶ ಹೆಚ್ಚಾಗಿದೆ. ಆದ್ದರಿಂದ ಇದನ್ನು ಅಕ್ಕಿ ಮತ್ತು ಇತರ ಧಾನ್ಯಗಳ ಬದಲಾಗಿ ಉಪಯೋಗಿಸಬಹುದು. ಈ ಬೆಳೆ ಧಾನ್ಯಗಳಿಗಿಂತ ಕಡಿಮೆ ಕಾಲದಲ್ಲಿ ಹೆಚ್ಚು ಫಸಲು ಕೊಡಬಲ್ಲದು. ಒಂದು ಎಕರೆಯಲ್ಲಿ ಬೆಳೆದ ಆ¯ೂಗೆಡ್ಡೆ ಮತ್ತು ಬತ್ತದಲ್ಲಿ ದೊರೆಯುವ ಆಹಾರಾಂಶಗಳನ್ನು ಮುಂದೆ ಕೊಟ್ಟಿದೆ. 

ಆಹಾರದ ಅಂಶ
ಆಲೊಗೆಡ್ಡೆ
ಬತ್ತ

ಪಿಷ್ಟ
ಜಿವಾತುಗಳು
ಮೇದಸ್ಸು 
ಲವಣಗಳು
ಆಹಾರ ಶಕ್ತಿ 
772 ಕೆ.ಜಿ.ಗಳು
3.2 "
40 "
60 "
3276 ಕೆ.ಲೊರಿ
 335 ಕೆ.ಜಿ. ಗಳು 
 30 "
 5.2 "
 3.6 "
 1856 ಕೆ.ಲೊರಿ. 

ಪ್ರಾಯೋಗಿಕ ದೃಷ್ಟಿಯಿಂದ ಆ¯ೂಗೆಡ್ಡೆ ಪ್ರಮುಖ ಕಚ್ಚಾವಸ್ತು. ಇದನ್ನು ಆಹಾರ ಮತ್ತು ತರಕಾರಿಯಾಗಿ ಬಳಸುತ್ತಾರೆ. ಇದರಿಂದ ಫರೀನಾ ಎಂಬ ಪಿಷ್ಟ ವನ್ನು ತಯಾರಿಸಿ ಲಾಂಡ್ರಿಯಲ್ಲೊ ಬಟ್ಟೆ ಗಿರಣಿಗಳಲ್ಲೊ ಬಳಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಇದರಿಂದ ಆಲ್ಮೊಹಾಲ್ ತಯಾರಿಸಿ ಕೈಗಾರಿಕೆಗಳಲ್ಲಿ ಬಳಸುತ್ತಾರೆ. ಆಗ ಉಳಿಯುವ ಹಿಂಡಿಯನ್ನು ದನಗಳ ಮೇವಿಗಾಗಿ ಉಪಯೋಗಿಸುತ್ತಾರೆ. ಒಂದು ಟನ್ ಆ¯ೂಗೆಡ್ಡೆಯಿಂದ 95% ರಷ್ಟು ಶುದ್ಧವಾದ 70 ಗ್ಯಾಲನ್ ಆಲ್ಮೊಹಾಲ್ ತಯಾರಾಗುವುದು. ಇದರಿಂದ ಡೆಕ್ಸಿಟ್ರಿನ್ ಮತ್ತು ಗ್ಲೂಕೋಸನ್ನೂ ತಯಾರಿಸುತ್ತಾರೆ. 

ಶತ್ರುಗಳು : ಗೆಡ್ಡೆ ಕೊರೆಯುವ ಕೀಟಗಳ ಹಾವಳಿಯಿಂದ ಶೇಖರಣೆ ಮಾಡಿದ ಆ¯ೂಗಡ್ಡೆ ಹಾಳಾಗುತ್ತದೆ. ಗೆಡ್ಡೆಯ ಆಕಾರ ವಿಕೃತವಾಗುವುದು. ಕೀಟ ಪೀಡಿತ ಗೆಡ್ಡೆಯನ್ನು ನೆಟ್ಟರೆ ವ್ಯಾಧಿ ಸಾಂಕ್ರಾಮಿಕವಾಗುತ್ತದೆ. ಇಲ್ಲಿ ರಕ್ಷಣೆಯ ಮಾರ್ಗ : ಕಾರ್ಬನ್ ಡೈಸಲ್ರೈಡ್ ಹೊಗೆಯನ್ನು ಹಾಯಿಸಿ ಆ ಪಿಡುಗನ್ನು ತಡೆಗಟ್ಟಬೇಕು : ಕೀಟಪೀಡಿತ ಗೆಡ್ಡೆಗಳನ್ನು ಬಿತ್ತನೆಗಾಗಿ ಉಪಯೋಗಿಸಬಾರದು : ಬಿತ್ತನೆ ಆ¯ೂಗಡ್ಡೆಯನ್ನು ಮಣ್ಣಿನಿಂದ ಮುಚ್ಟಿ, ಕೀಟದ ಹಾವಳಿಯನ್ನು ತಡೆಯಬೇಕು. 

ಕೊಂಬೆ ಕತ್ತರಿಸುವ ಹುಳುಗಳು : ಆ¯ೂಗೆಡ್ಡೆಯ ಸಸ್ಯ ಕತ್ತರಿಸುವ ಹುಳುಗಳ ಪಿಡುಗೂ ಹತ್ತುವುದುಂಟು. ಆ ಕೀಟದ ಕಂಬಳಿ ಹುಳು ಆಲೂಗಡ್ಡೆ ಎಳೆ ಸಸಿಗಳನ್ನು ಭೂಮಿಯ ಮಟ್ಟದಲ್ಲಿ ಕತ್ತರಿಸಿ ಹಾಕಿ ಬೆಳೆಯನ್ನು ನಾಶಮಾಡುತ್ತದೆ. ಇದನ್ನು ತಡೆಗಟ್ಟಲು 5% ಇರುವ ಬಿ.ಎಚ್.ಸಿ. ಅಥವಾ ಡಿ.ಡಿ.ಟಿ. ಪುಡಿಯನ್ನು ಬೆಳೆಯ ಸಾಲುಗಳಲ್ಲಿ ಹಾಕಿ ಮಣ್ಣಿಗೆ ಮಿಶ್ರಮಾಡಬೇಕು. ಅಥವಾ 5% ಇರುವ ಆಲ್‍ಡ್ರೈನ್ ಅಥವಾ ಕ್ಲೋರೊಡನ್ ಪುಡಿಯನ್ನು ಎರಚಬೇಕು. 

ಜಾಸಿಡ್ಸ್ : ಹಸಿರುಬಣ್ಣದ ಕುಪ್ಪಳಿಸುವ ಅಗಾಧ ಸಂಖ್ಯೆಯ ಜಾಸಿಡ್ಡುಗಳು ಆಲೊಗಡ್ಡೆ ಸಸ್ಯದ ಎಳೆಯ ಭಾಗಗಳಲ್ಲಿ ಇದ್ದು ಸಸ್ಯರಸವನ್ನು ಹೀರುತ್ತವೆ. ಸಸ್ಯರಸವನ್ನು ಹೀರುವುದರಿಂದ ಎಲೆಗಳು ಮುದುರಿಕೊಂಡು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾವಳಿ ಅತಿಯಾದಾಗ ಎಲೆ ಮತ್ತು ಇತರ ಎಳೆಯ ಭಾಗಗಳು ಒಣಗಿ ಹೋಗುತ್ತವೆ. ಈ ಪಿಡುಗನ್ನು ತಪ್ಪಿಸಲು 5% ಇರುವ 1.2 ಕೆ.ಜಿ. ಡಿ.ಡಿ.ಟಿ. ಪುಡಿಯನ್ನು 30 ಲೀಟರ್ ನೀರಿನಲ್ಲಿ ದ್ರಾವಣಮಾಡಿ ಸಿಂಪಡಿಸಬೇಕು : ಅಥವಾ 5 ಚಮಚ ಎಂಡರಿನ್ ಪುಡಿಯನ್ನು 15 ಲೀಟರ್ ನೀರಿನಲ್ಲಿ ದ್ರಾವಣಮಾಡಿ ಸಿಂಪಡಿಸಬೇಕು. 

ಚಿಪ್ಪಿನ ಹುಳು : ಚಿಪ್ಪಿನ ಹುಳು ಮತ್ತು ಇವುಗಳ ಮರಿಗಳು ಸಸ್ಯದ ಎಲೆಯ ನಾಳಗಳನ್ನು ಬಿಟ್ಟು ಉಳಿದ ಭಾಗವನ್ನು ತಿಂದು ಹಾಕುತ್ತವೆ. ಜಾಸಿಡ್ಡುಗಳಿಗೆ ಅನುಸರಿಸುವ ಹತೋಟಿಯಕ್ರಮ ಇದಕ್ಕೊ ಪರಿಣಾಮಕಾರಿಯಾಗುತ್ತದೆ. 
ಹೇನು : ಹೇನುಗಳು ಸಸ್ಯದ ತುದಿಯ ಎಳೆ ಭಾಗಗಳಲ್ಲಿ ಅಗಾಧ ಸಂಖ್ಯೆಯಲ್ಲಿದ್ದು ಸಸ್ಯರಸವನ್ನು ಹೀರಿ ಜೀವಿಸುತ್ತವೆ. ಕೆಲವು ಸಲ ಹೇನುಗಳು ನಂಜುರೋಗವನ್ನು ಹರಡಿ ಬೆಳೆಯನ್ನು ನಷ್ಟಪಡಿಸುತ್ತವೆ. ಇದರ ನಿವಾರಣೆಗೆ ಜಾಸಿಡ್ಡುಗಳಿಗೆ ಅನುಸರಿಸುವ ಹತೋಟಿಯ ಕ್ರಮವನ್ನು ಅನುಸರಿಸಬಹುದು.

ಆ¯ೂಗೆಡ್ಡೆಗೆ ಇತರ ರೋಗಗಳೊ ತಗಲುತ್ತವೆ. ಅವುಗಳಲ್ಲಿ ಮುಖ್ಯವಾದವನ್ನು ಕೆಳಗೆ ಸೂಚಿಸಿದೆ. 
ಆರ್ಲಿಬ್ಲೈಟ್ : ಆರ್ಲಿಬ್ಲೈಟ್ ರೋಗ ಗೆಡ್ಡೆಯಾಗುವುದಕ್ಕೆ ಮುಂಚೆ ಬರುತ್ತದೆ. ಇದು ಶಿಲೀಂಧ್ರಗಳಿಂದ ತಗಲುವುದು. ಆರ್ಲಿಬ್ಲೈಟ್ ರೋಗ ಎಲೆಗಳ ಮೇಲೆ ನಸು ಕಂದು ಬಣ್ಣದ ಮುಚ್ಚೆಗಳಿಂದ ಪ್ರಾರಂಭವಾಗುತ್ತದೆ. ಈ ಮಚ್ಚೆಗಳು ಅಗಲವಾಗಿ, ಎಲೆಗಳನ್ನು ಪೂರ್ಣವಾಗಿ ಆವರಿಸಿ ಒಣಗಿ ಪೂರ್ತಿ ಉದುರಿಹೋಗುವಂತೆ ಮಾಡುತ್ತವೆ. ಈ ರೋಗ ಗೆಡ್ಡೆಗಳನ್ನು ಸಹ ಮುಟ್ಟಿ ಮಚ್ಚೆಗಳನ್ನು ಉಂಟುಮಾಡಿ ಗೆಡ್ಡೆಗಳು ಕೊಳೆತು ಹೋಗುವಂತೆ ಮಾಡುತ್ತದೆ. ರೋಗಪೀಡಿತ ಸಸ್ಯಭಾಗ ಭೂಮಿಯಲ್ಲಿ ಉಳಿದರೆ ಇದು ಮತ್ತೆ ಮುಂದಿನ ಬೆಳೆಗೊ ರೋಗವನ್ನು ಹರಡುತ್ತದೆ. ಈ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು : ಶುದ್ಧವಾದ ಬಿತ್ತನೆಯನ್ನು ನಾಟಿ ಮಾಡಬೇಕು : ಮುನ್ನೆಚ್ಚರಿಕೆಯ ಕ್ರಮವಾಗಿ ಎರಡು ವಾರಗಳಿಗೆ ಒಂದು ಸಲ 1% ಇರುವ ಬೋರ್ಡೊ ದ್ರಾವಣವನ್ನು ಸಿಂಪಡಿಸಬೇಕು : ರೋಗದ ಸೂಚನೆ ಕಂಡಕೂಡಲೆ ರೋಗಪೀಡಿತ ಸಸ್ಯವನ್ನು ಸುಟ್ಟುಹಾಕಿ ಅಥವಾ ಆಳವಾಗಿ ಭೂಮಿಯಲ್ಲಿ ಹೂತುಹಾಕಿ ನಾಶಪಡಿಸಬೇಕು. 

ಲೇಟ್‍ಬ್ಲೈಟ್ : ಇದು ಶಿಲೀಂಧ್ರಗಳಿಂದ ಬರುತ್ತದೆ. ಶಿಲೀಂಧ್ರಗಳು ಸಸ್ಯದ ಮೇಲೆ ಇರುತ್ತವೆ : ತಂಪಾದ ಮೋಡ ಕವಿದ ಹವಾಗುಣವಿದ್ದಾಗ ಫಕ್ಕನೆ ಬಿಸಿಲು ಪ್ರಾರಂಭವಾದರೆ ರೋಗ ಪ್ರಾರಂಭವಾಗಿ ಇಡೀ ಬೆಳೆಯನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಲೇಟ್‍ಬ್ಲೈಟ್ ರೋಗ ಸಸ್ಯದಲ್ಲಿ ಗೆಡ್ಡೆ ಬಿಡಲು ಪ್ರಾರಂಭವಾದ ಮೇಲೆ ಬರುತ್ತದೆ. ಮೊದಲು ಎಲೆಗಳ ಮೇಲೆ ಸಣ್ಣ ಕಂದುಬಣ್ಣದ ಮಚ್ಚೆಗಳು ಕಾಣಿಸಿಕೊಂಡು ಕ್ರಮೇಣ ಇವು ಅಗಲವಾಗಿ ಕಪ್ಪು ಬಣ್ಣಕ್ಕೆ ತಿರುಗಿ ಎಲೆ, ತೊಟ್ಟು, ಕಾಂಡ ಮತ್ತು ಗೆಡ್ಡೆಗಳಿಗೊ ಹರಡುತ್ತವೆ. ರೋಗ ಕಂಡ ಒಂದೆರಡು ದಿವಸಗಳಲ್ಲಿ ತೋಟದ ಬೆಳೆಯೆಲ್ಲ ಕುಸಿದು ಬೀಳುತ್ತದೆ. ಗೆಡ್ಡೆಗಳಲ್ಲಿ ಕಪ್ಪು ಮಚ್ಚೆಗಳಾಗಿ ಕೊಳೆತು ಹೋಗುತ್ತವೆ. ಈ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಶ್ರಮಗಳು : ರೋಗವಿಲ್ಲದ ಬಿತ್ತನೆಯನ್ನು ನೆಡಬೇಕು : ಮುನ್ನೆಚ್ಚರಿಕೆಯ ಕ್ರಮವಾಗಿ ಎರಡು ವಾರಗಳಿಗೆ ಒಂದು ಸಾರಿ 1% ಇರುವ ಬೋರ್ಡೊದ್ರಾವಣವನ್ನು ಸಿಂಪಡಿಸಬೇಕು : ರೋಗದ ಸೊಚನೆ ಕಂಡ ಕೂಡಲೇ ರೋಗಪೀಡಿತ ಸಸ್ಯಗಳನ್ನು ಕಿತ್ತು ಸುಟ್ಟು ಹಾಕಬೇಕು. 
ಬಂಗಡಿ ರೋಗ: ಇದು ಬ್ಯಾಕ್ಷಿರಿಯಾದಿಂದ ಬರುತ್ತದೆ. ಇವು ಗೆಡ್ಡೆಯ ಒಳಭಾಗದಲ್ಲಿ ಸೇರಿಕೊಂಡು ಸರಿಯಾದ ಪರಿಸ್ಥಿತಿ ದೊರಕಿದಾಗ ಸಂತಾನೋತ್ಪತ್ತಿಮಾಡಿ ಗೆಡ್ಡೆಗಳು ಕೊಳೆಯುವಂತೆ ಮಾಡುತ್ತವೆ. ಇದರಿಂದ ರೋಗಪೀಡಿತ ಸಸ್ಯ ಸತ್ತು ಹೋಗುತ್ತದೆ. ಈ ರೋಗವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು : ಶುದ್ಧವಾದ ಬಿತ್ತನೆಯನ್ನು ನೆಡಬೇಕು : ಕತ್ತರಿಸುವ ಚಾಕನ್ನು ಆಗಾಗ ಅಗಲಾಲ ದ್ರಾವಣದಲ್ಲಿ ಅದ್ದಿ ಬಿತ್ತನೆ ಆ¯ೂಗೆಡ್ಡೆ ಕತ್ತರಿಸಬೇಕು : ರೋಗ ಸೂಚನೆ ಕಂಡ ಕೂಡಲೆ ರೋಗಪೀಡಿತ ಸಸ್ಯವನ್ನು ಸುಟ್ಟುಹಾಕಬೇಕು. 

ನಂಜು ರೋಗ: ಇದು ಹೇನುಗಳಿಂದ ಹರಡುತ್ತದೆ. ನಂಜುಗಳು ಸಸ್ಯವನ್ನು ಸೇರಿದ ಕೂಡಲೆ ಎಲೆಗಳು ಬಣ್ಣವಿಲ್ಲದಂತಾಗಿ ದಪ್ಪವಾಗಿ ಒರಟಾಗಿ ಬಟ್ಟಲಿನ ಆಕಾರವನ್ನು ತಾಳುತ್ತವೆ : ಸಸ್ಯಗಳ ಬೆಳವಣಿಗೆ ನಿಂತುಹೋಗುತ್ತದೆ. ನಂಜುರೋಗ ಬಂದ ಸಸ್ಯ ಗೆಡ್ಡೆ ಬಿಡುವುದಿಲ್ಲ. 				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ